ಭಾವಪೂರ್ಣ ಅಬಿನಯಕ್ಕೆ ಹೆಸರಾದ ಕನ್ನಡ ಚಲನಚಿತ್ರ ನಟಿ ಮತ್ತು ನಿರ್ಮಾಪಕಿ. ಗೆಜ್ಜೆಪೂಜೆ ಚಿತ್ರದಲ್ಲಿ ಚಿಕ್ಕ ಪಾತ್ರವೊಂದನ್ನು ಅಬಿsನಯಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದರು. ಕನ್ನಡದಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಪಾತ್ರವಹಿಸಿದ್ದಾರೆ. ಹೆಸರಾಂತ ನಿರ್ದೇಶಕ ಕಣಗಾಲ್ ಪುಟ್ಟಣ ಇವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಉಪಾಸನೆ, ನಾಗರಹಾವು, ಎಡಕಲ್ಲು ಗುಡ್ಡದ ಮೇಲೆ, ಶುಭಮಂಗಳ, ಕಥಾಸಂಗಮ, ರಾಜ ನನ್ನ ರಾಜ, ಹೊಂಬಿಸಿಲು, ರಂಗನಾಯಕಿ, ಚಿತ್ರಗಳಲ್ಲಿ ಅಪೂರ್ವ ಅಬಿsನಯ ನೀಡಿದ್ದಾರೆ. ಕಥಾಸಂಗಮ ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಪ್ರಯೋಗ. ಕನ್ನಡದ ಮೂರು ಪ್ರಸಿದ್ಧ ಕತೆಗಳನ್ನು ಒಂದೇ ಚಿತ್ರದಲ್ಲಿ ಅಳವಡಿ ಸಿರುವ ಈ ಪ್ರಯೋಗಾತ್ಮಕ ಚಿತ್ರದಲ್ಲಿ ಆರತಿ ಮುನಿತಾಯಿಯಾಗಿ ನೀಡಿದ ಅಂಧ ಗೃಹಿಣಿಯ ಅಬಿನಯಕ್ಕಾಗಿ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಲಬಿsಸಿದೆ (೧೯೭೫-೭೬). ಆರತಿಯವರ ಅಬಿsನಯ ಕೌಶಲ್ಯಕ್ಕೆ ಸಾಕ್ಷಿಯಾದ ಇನ್ನೊಂದು ಚಿತ್ರ ರಂಗನಾಯಕಿ. ರಂಗಭೂಮಿಯ ಬದುಕು ಹಾಗೂ ವೈಯಕ್ತಿಕ ಬದುಕಿನ ನಡುವಣ ಸಂಘರ್ಷವನ್ನು ಕುರಿತ ಈ ಚಿತ್ರದಲ್ಲಿನ ಆರತಿಯವರ ಅಬಿನಯ ಅವಿಸ್ಮರಣೀಯವಾದದ್ದು. ಈ ಚಿತ್ರದ ಇವರ ಅಬಿsನಯಕ್ಕೆ ಕೂಡ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಲಭ್ಯವಾಗಿದೆ (೧೯೮೦-೮೧). ಇವರು ಧರ್ಮಸೆರೆ ಎಂಬ ಚಲನಚಿತ್ರವನ್ನು ನಿರ್ಮಿಸಿ, ಅದರಲ್ಲಿ ನಟಿಸಿದ್ದಾರೆ. ಈ ಚಿತ್ರದ ಅಬಿsನಯಕ್ಕೂ ಇವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಬಿಸಿದೆ (೧೯೭೮-೭೯). ಇವರು ವಿಧಾನ ಪರಿಷತ್ತಿನ ನಾಮಕರಣ ಸದಸ್ಯೆಯಾಗಿಯೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಕಣಗಾಲ್ ಪುಟ್ಟಣ್ಣನವರನ್ನು ಇವರು ವಿವಾಹವಾಗಿದ್ದರು. ಅವರಿಂದ ದೂರ ಸರಿದ ಬಳಿಕ ಮಾಜಿ ಶಿಕ್ಷಣ ಸಚಿವ ಎಂ.ರಘುಪತಿಯವರನ್ನು ವಿವಾಹ ವಾಗಿದ್ದರು. ಈ ದಾಂಪತ್ಯವೂ ಹೆಚ್ಚು ದಿನ ಉಳಿಯಲಿಲ್ಲ. ಕೆಲಕಾಲಾನಂತರ ಬಣ್ಣದ ಬದುಕಿನಿಂದ ಪೂರ್ಣವಾಗಿ ದೂರ ಸರಿದರು. ಕನ್ನಡದ ಹೆಸರಾಂತ ನಾಯಕ ನಟರಾದ ರಾಜಕುಮಾರ್, ಶ್ರೀನಾಥ್, ವಿಷ್ಣುವರ್ಧನ, ಅನಂತನಾಗ್, ಶಂಕರನಾಗ್ ಮೊದಲಾದವರೊಂದಿಗೆ ಇವರು ಅಬಿನಯಿಸಿದ್ದಾರೆ.

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ